Tuesday, 24 March 2015

Saturday, 21 March 2015

OUR SCHOOL DAY....

2015 ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಹಿನ್ನೋಟ......
ಮುಖ್ಯಅತಿಥಿ :- ಶ್ರೀ ಪುಂಡೂರು ಪುರುಷೋತ್ತಮ ಪುಣಿಚಿತ್ತಾಯರು
ಉದ್ಘಾಟನೆ ;- ಶ್ರೀಮತಿ ಬಿಂದು ಕೆ 


ಸಭಾಕಾರ್ಯಕ್ರಮ......





ಮಕ್ಕಳ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ....

















SCHOOL ONE DAY TRIP

ನಮ್ಮ ಶಾಲಾ ಪ್ರವಾಸ ( 16-01-2015)
 ಕೆಲವು ರಸನಿಮಿಷಗಳನ್ನು ನಿಮ್ಮೊಂದಿಗೆ ಹಂಚುತ್ತೇವೆ..
ಬೆಳಗ್ಗೆ 6 ಗಂಟೆಗೆ ನಮ್ಮಶಾಲಾ ಬಳಿಯಿಂದ ನಮ್ಮ ಶಾಲಾ ಬಸ್ಸಲ್ಲಿ ಹೊರಟೆವು..ಚಳಿ ಏನೋ ಕಮ್ಮಿ ಇತ್ತು.ನಮ್ಮ ಪ್ರಯಾಣ ಕಾರಿಂಜ ಬೆಟ್ಟದ ಕಡೆಗೆ ಆಗಿತ್ತು.ಮಕ್ಕಳೆಲ್ಲಾ ಭಾರಿ ಖುಷಿಯಲ್ಲಿ ಇದ್ದರು.ಕಾರಿಂಜಕ್ಕೆ ತಲುಪಿದಾಗ ಎಲ್ಲರ ಮನಸೆಳೆದದ್ದು ವಿಶಾಲವಾದ ಕೆರೆಯಾಗಿತ್ತು.ಅಲ್ಲೇ ಸಮೀಪ ನಾವು ಬೆಳಗ್ಗಿನ ಉಪಾಹಾರ ಸೇವಿಸಿದೆವು.ಬಳಿಕ ಪಾರ್ವತಿ ದೇವಸ್ಥಾನಕ್ಕೆ ತೆರಳಿದೆವು..ಕಾರಿಂಜೇಶ್ವರನ ಬಳಿ ತಲುಪಲು ಬೆಟ್ಟ ಹತ್ತಿದೆವು.ಮಂಗಗಳ ಗುಂಪೇ ಅಲ್ಲಿತ್ತು.ಒಂದು ಮಂಗವು ನಮ್ಮ ಕೈಯ್ಯಲ್ಲಿದ್ದ ಮಿಟಾಯಿ ಕಟ್ಟ ಎಳೆದೊಯ್ದಿತು..
      ದೇವಾಲಯದ ಬಳಿ ಅರ್ಜುನನ ಬಾಣದ ಗುರುತು..ಸತ್ಯ ಪ್ರತಿಜ್ಞಾ ಕಲ್ಲು..ಇವುಗಳನ್ನು ನೋಡಿ ಪ್ರಯಾಣ ಮುಂದುವರಿಸಿದೆವು...
ಬಳಿಕ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿದೆವು.ಅಲ್ಲಿ ಮಧ್ಯಾಹ್ನದ ಭೋಜನ ಮಾಡಿದೆವು.ಅಲ್ಲಿದ್ದ ಪಾರ್ಕ್..ವಸ್ತುಪ್ರದರ್ಶನ...ಕಾರುಗಳ ಸಂಗ್ರಹ ಇವುಗಳನ್ನೆಲ್ಲಾ ವೀಕ್ಷಿಸಿದ ಬಳಿಕ ಸೌತೆಯಡ್ಕ ಗಣಪತಿ ದೇವಸ್ಥಾನಕ್ಕೆತೆರಳಿದೆವು.ಅಲ್ಲಿಗೆ ತಲುಪುವಾಗಲೇ ಕತ್ತಲು ತುಂಬಿತ್ತು.ಪ್ರಾರ್ಥನೆಯ ಬಳಿಕ ಲಘು ಉಪಾಹಾರ ಸೇವಿಸಿ ನಮ್ಮ ಊರಿಗೆ ಮರಳಿದೆವು.