ಯಾವತ್ತೂ ತರಗತಿಯಲ್ಲಿ ಮಾತೆ ಆಡದ ಶ್ರೀಜಿತ್ ಸಾಕ್ಷರಂ ತರಗತಿಯಲ್ಲಿ ಅಧ್ಯಾಪಕರಿಗೆಲ್ಲಾ ಅಚ್ಚರಿಯನ್ನು ಮೂಡಿಸುವಂತೆ ಪ್ರತಿಕ್ರಿಯಿಸತೊಡಗಿದ.ಬಾಕಿ ಉಳಿದ ಮಕ್ಕಳು ಏನು ಕಡಿಮೆ ಅಲ್ಲ.ಮಕ್ಕಳ ಆಸಕ್ತಿಯು ನಮ್ಮಲ್ಲೂ ಕೂಡ ಹೊಸ ಉತ್ಸಾಹವನ್ನುಂಟು ಮಾಡಿದೆ.ಕೊಟ್ಟ ಮನೆಕೆಲಸಗಳನ್ನು ಸರಿಯಾಗಿ ಮಾಡದೆ ಬರುತಿದ್ದ ಈ ಮಕ್ಕಳು ತಮ್ಮ ದಿನನಿತ್ಯದ ಮನೆಕೆಲಸವನ್ನು ನಮ್ಮಲ್ಲಿ ತಂದು ತೋರಿಸುವಾಗ ಮಕ್ಕಳ ಮುಖದ ಕಳೆಯಂತೆ ನಮ್ಮ ಹೃದಯ ಕೂಡ ತುಂಬಿ ಬಂತು.ಈ ಸಂಧರ್ಭ ನಿಜಕ್ಕೂ ಅಧ್ಯಾಪಕ ಜೀವನಕ್ಕೆ ಅರ್ಥ ಕೊಡುವಂತಹದ್ದಾಗಿತ್ತು.
10 ದಿನದ ತರಗತಿಯ ಬಳಿಕ ಮಾಡಿದ ಮೌಲ್ಯನಿರ್ಣಯಯದಲ್ಲಿ 11 ಮಕ್ಕಳಲ್ಲಿ 7 ಮಂದಿ A ಗ್ರೇಡ್ ಪಡೆದದ್ದು ನಿಜಕ್ಕೂ ಹೆಮ್ಮೆಯ ವಿಚಾರ.10 ನೇ ದಿನದಲ್ಲೇ ಇಷ್ಟು ಬದಲಾವಣೆಯಿದ್ದರೆ ಇನ್ನು55 ದಿನದ ಬಳಿಕ ಇವರು ಖಂಡಿತ ಓದಲು ಬರೆಯಲು ಅಗ್ರ ಸ್ಥಾನದಲ್ಲಿ ಬರುವರು ಎಂಬುದಕ್ಕೆ ಯಾವುದೇ ಸಂಶಯವಿಲ್ಲ.ಇನ್ನು ಉಳಿದ 4 ಮಕ್ಕಳಲ್ಲಿ ಒಬ್ಬ B ಗ್ರೇಡ್ ಮತ್ತು ಮೂವರು C ಗ್ರೇಡ್ ಪಡೆದರು.ಈ ಮಕ್ಕಳಲ್ಲೂ ಕೂಡ ಬದಲಾವಣೆಯನ್ನು ನಾವು ಗಮನಿಸಿದ್ದೇವೆ.ಅವರಿಗೆ ಇನ್ನು ಬೇಕಾದ ಎಲ್ಲಾ ಸಹಾಯವನ್ನು ಮಾಡಿ ಅವರನ್ನು ಕೂಡ A ಗ್ರೇಡ್ ಮಟ್ಟಕ್ಕೆ ತರಬೇಕು ಎಂಬುದೇ ನಮ್ಮ ಗುರಿ.ಈ ಗುರಿ ಸಾಧನೆಗೆ ನಾವೆಲ್ಲಾ ಒಟ್ಟಾಗಿ ಶ್ರಮಿಸುತ್ತೇವೆ.ನಿಮ್ಮೆಲ್ಲರ ಸಹಕಾರವು ನಮಗೆ ಬೇಕು.

No comments:
Post a Comment
NIMMA