Friday 26 December 2014


ಹೊಸ ವರ್ಷದ ಶುಭಾಶಯಗಳು

2015


ಹೊಸ ವರುಷ ನಿಮಗೆ ಹೊಸ ಹರುಷ ತರಲಿ

Saturday 1 November 2014


 ಕುಂಬಳೆ ಸಬ್ ಜಿಲ್ಲೆಯಲ್ಲಿ ಉತ್ತಮ ಶಾಲಾ ಬ್ಲಾಗ್ ನ್ನು ಆಯ್ಕೆಮಾಡಲಾಯಿತು,ಇದರಲ್ಲಿ ನಮ್ಮ ಶಾಲಾ ಬ್ಲಾಗ್  3 ನೇ ಸ್ಥಾನವನ್ನು ಪಡೆದಿರುವ ಹೆಮ್ಮೆಯ ವಿಚಾರವನ್ನು ನಿಮಗೆಲ್ಲರಿಗೂ ತಿಳಿಸುತ್ತಿದ್ದೇನೆ.ಈ ಬಹುಮಾನವು ಮುಂದೆ ಕೂಡ ಉತ್ತಮ ರೀತಿಯಲ್ಲಿ ಮುಂದುವರಿಸಲು ಒಂದು ಪ್ರೇರೇಪಣೆಯಾಗಿರುವುದು.ನಮ್ಮ ಬ್ಲಾಗ್ ಉತ್ತಮ ಮಟ್ಟಕ್ಕೆ ತಲುಪಬೇಕಾದರೆ ನಿಮ್ಮೆಲ್ಲರ ಸಹಕಾರ ನಮಗೆ ಬೇಕು.ಬ್ಲಾಗಿನ ಮೂಲಕ ನಮ್ಮೊಂದಿಗೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.ಜೊತೆಗೆ ಶಾಲೆಯ ಯಶಸ್ಸಿಗೆ ಕೈ ಜೋಡಿಸಿ....
                                                                  ಧನ್ಯವಾದಗಳು
                                                                  ಮುಖ್ಯೋಪಾಧ್ಯಾಯಿನಿ ಹಾಗೂಅಧ್ಯಾಪಕ ವೃಂದ

Saturday 27 September 2014

NAVOLLASA SAHAVASA CAMP

ನವೋಲ್ಲಾಸ ಸಹವಾಸ ಶಿಬಿರ

ಸಾಕ್ಷರಂನ ನವೋಲ್ಲಾಸ ದ್ವಿ-ದಿನ ಸಹವಾಸ ಶಿಬಿರವನ್ನು ದಿನಾಂಕ  ರಿಂದ ರವರೆಗೆ ನಮ್ಮ ಶಾಲೆಯಲ್ಲಿ ಜರಗಿತು.ಮಕ್ಕಳ ಕಲಿಕೆಯೊಂದಿಗೆ ಅವರಲ್ಲಿ ಸುಪ್ತವಾಗಿರುವ ಹಲವು ಪ್ರತಿಭೆಗಳನ್ನು  ಇದರ ಮೂಲಕ ಹೊರತರಲು ನಮ್ಮಿಂದ ಸಾಧ್ಯವಾಗಿದೆ.ಹೆಸರಿಗೆ ತಕ್ಕಂತೆ ಈ ಶಿಬಿರವು ನವೋಲ್ಲಾಸವನ್ನು ಮೂಡಿಸಿದೆ.

ಶಿಬಿರದ ಕೆಲವು ರಸನಿಮಿಷಗಳು.....................















CLASS P.T.A MEETING



ನಮ್ಮೀ ಶಾಲಾ ತರಗತಿ ಪಿ.ಟಿ.ಎ ಸಭೆಯು ದಿನಾಂಕ 25-09-2014  ರಂದು ಜರಗಿತು.ಎಲ್ಲಾ ತರಗತಿಗಳಲ್ಲೂ ಕಾಲು
 ವಾರ್ಷಿಕ ಪರೀಕ್ಷೆಯ ವಿಶ್ಲೇಷಣೆ ನಡೆಯಿತು.ಹಾಗೂ ಮಕ್ಕಳ ಸಮ್ಮುಖದಲ್ಲೇ ತರಗತಿ ಅಧ್ಯಾಪಕರು ಹೆತ್ತವರೊಂದಿಗೆ ವಿಚಾರವಿನಿಮಯ ನಡೆಸಿದರು. ಓದುವಿಕೆಯನ್ನು ಫಲಪ್ರದಗೊಳಿಸಲು ಪ್ರತಿದಿನ ಒಂದು ಗಂಟೆಯಾದರೂ ಮನೆಯಲ್ಲಿ ಓದುವ ಹವ್ಯಾಸ ಮಾಡಬೇಕೆಂದು ತಿಳಿಸಲಾಯಿತು.

Tuesday 23 September 2014

ROLE PLAY 1 STANDARD







 "ಚೀಯಾಂ ಚೀಯಾಂ ಚಿಕ್ಕ ಗುಬ್ಬಿ
ಚೀಯಾಂ ಚೀಯಾಂಗೋ......"
ಈ ಗೀತೆಯ ದೃಶ್ಯಾವಿಷ್ಕಾರವನ್ನು ಒಂದನೇ ತರಗತಿಯ ಮಕ್ಕಳು ಬಹಳ ಆಕರ್ಷಕವಾದ ರೀತಿಯಲ್ಲಿ ಹಾಡಿ ಅಭಿನಯಿಸಿದರು.ಗುಬ್ಬಿಯ ಕಥೆಯನ್ನು ಹಾಡಿ ಅಭಿನಯಿಸುವಾಗ ಅವರೆಲ್ಲರೂ ನಿಜಕ್ಕೂ ಅದೇ ಕಥಾಪಾತ್ರವಾಗಿ ಬದಲಾಗಿದ್ದರು.ಸಿರಿಯು ಗುಬ್ಬಿಯ ಮುಖವಾಡ ಧರಿಸಿ ತನ್ನ ಮುಗ್ಧ ಮಾತಿನ ಮೂಲಕ ನಾಟಕದ ನೈಜ ರೂಪವನ್ನುಇನ್ನೂ ಉತ್ತಮಪಡಿಸಿದಳು.ಉಳಿದವರೂ ಕೂಡ ತಮ್ಮತಮ್ಮ ಅಭಿನಯವನ್ನುಬಹಳ ಉತ್ತಮ ರೀತಿಯಲ್ಲಿ ಮಾಡಿದರು.ಇದಕ್ಕೆಲ್ಲದಕ್ಕೂ ಬೆನ್ನೆಲುಬಿನಂತೆ ಅವರ ನೆಚ್ಚಿನ ಅಧ್ಯಾಪಿಕೆ ಉಷಾ ಅವರು ಮಕ್ಕಳ ಜೊತೆಗಿದ್ದರು.ಈ ತರಗತಿಯು ಮಕ್ಕಳಿಗೂ ಟೀಚರಿಗೂ ಮರೆಯಲಾಗದ ಸವಿ ನೆನಪುಗಳಲ್ಲಿ ಒಂದಾಗುವುದು..

Tuesday 16 September 2014

TEACHERS DAY.........

                     ಅಂದು ಬೆಳಗ್ಗೆ ಮಕ್ಕಳ ಕೈಯಿಂದ ಗುಲಾಬಿ ಹೂ ಸ್ವೀಕರಿಸಿದಾಗ ನನ್ನ ಮನದಲ್ಲಿ ಎಲ್ಲೋ ಒಂದು ತರ ಖುಷಿ...ನಮ್ಮ ಮಕ್ಕಳು ನಮ್ಮಲ್ಲಿ ಇಟ್ಟಿರುವ ಪ್ರೀತಿಯಲ್ಲವೇ ಈ ಕಾಣಿಕೆಯಲ್ಲಿರುವುದು..ಗುಲಾಬಿಯಾಗಲಿ...ಒಂದು ಗ್ರೀಟಿಂಗ್ ಕಾರ್ಡ್ ಆಗಲಿ....ನಿಜಕ್ಕೂ ಆ ಎಳೆ ಮನಸ್ಸುಗಳಿಗೆ ಅದು ದೊಡ್ಡ ಕಾರ್ಯವೇ ಸರಿ...ಅವರು ಕೊಟ್ಟ ಯಾವ ಕಾಣಿಕೆಯಾಗಲಿ ಅದು ನಮಗೂ ಅಚ್ಚು ಮೆಚ್ಚೆ,,,,ಅಂದು ನಮ್ಮ ದಿನ....ಶಿಕ್ಷಕರ ದಿನ...


        ಎಂದಿನಂತೆ ನಮ್ಮ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ ಅವರು ಅಸಂಬ್ಲಿಯಲ್ಲಿ ಶಿಕ್ಷಕರ ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಸಂಜೆ  ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಶಿಕ್ಷಕರ ದಿನದ ಸಂದೇಶದ ನೇರಪ್ರಸಾರವನ್ನು ದೂರದರ್ಶನದ ಮೂಲಕ ಮಕ್ಕಳಿಗೆ ವೀಕ್ಷಿಸಲು ಅವಕಾಶವನ್ನು ಒದಗಿಸಲಾಯಿತು

Onam celebration



ಓಣಂ ಹಬ್ಬದ ಪ್ರಯುಕ್ತ ಮಕ್ಕಳಿಗೆ ಸ್ಪರ್ಧೆಗಳನ್ನು ನಡೆಸಲಾಯಿತು

ಓಣಂ ಔತಣಕ್ಕಾಗಿ ಅಡುಗೆಯಲ್ಲಿ ನಿರತರಾಗಿರುವ ಮಾತೆಯರು



 ಇದು ನಮ್ಮ ಪೂಕಳಂ



ಓಣಂ ಔತಣ

Tuesday 2 September 2014

ಸಂತೋಷಪೂರ್ವಕ....................................

                          ಯಾವತ್ತೂ ತರಗತಿಯಲ್ಲಿ ಮಾತೆ ಆಡದ ಶ್ರೀಜಿತ್ ಸಾಕ್ಷರಂ ತರಗತಿಯಲ್ಲಿ ಅಧ್ಯಾಪಕರಿಗೆಲ್ಲಾ ಅಚ್ಚರಿಯನ್ನು ಮೂಡಿಸುವಂತೆ ಪ್ರತಿಕ್ರಿಯಿಸತೊಡಗಿದ.ಬಾಕಿ ಉಳಿದ ಮಕ್ಕಳು ಏನು ಕಡಿಮೆ ಅಲ್ಲ.ಮಕ್ಕಳ ಆಸಕ್ತಿಯು ನಮ್ಮಲ್ಲೂ ಕೂಡ ಹೊಸ ಉತ್ಸಾಹವನ್ನುಂಟು ಮಾಡಿದೆ.ಕೊಟ್ಟ ಮನೆಕೆಲಸಗಳನ್ನು ಸರಿಯಾಗಿ ಮಾಡದೆ ಬರುತಿದ್ದ ಈ ಮಕ್ಕಳು ತಮ್ಮ ದಿನನಿತ್ಯದ ಮನೆಕೆಲಸವನ್ನು ನಮ್ಮಲ್ಲಿ ತಂದು ತೋರಿಸುವಾಗ ಮಕ್ಕಳ ಮುಖದ ಕಳೆಯಂತೆ ನಮ್ಮ ಹೃದಯ ಕೂಡ ತುಂಬಿ ಬಂತು.ಈ ಸಂಧರ್ಭ ನಿಜಕ್ಕೂ ಅಧ್ಯಾಪಕ ಜೀವನಕ್ಕೆ ಅರ್ಥ ಕೊಡುವಂತಹದ್ದಾಗಿತ್ತು.
                               10  ದಿನದ ತರಗತಿಯ ಬಳಿಕ ಮಾಡಿದ ಮೌಲ್ಯನಿರ್ಣಯಯದಲ್ಲಿ 11  ಮಕ್ಕಳಲ್ಲಿ 7 ಮಂದಿ A ಗ್ರೇಡ್ ಪಡೆದದ್ದು ನಿಜಕ್ಕೂ  ಹೆಮ್ಮೆಯ ವಿಚಾರ.10 ನೇ ದಿನದಲ್ಲೇ ಇಷ್ಟು ಬದಲಾವಣೆಯಿದ್ದರೆ ಇನ್ನು55 ದಿನದ ಬಳಿಕ ಇವರು ಖಂಡಿತ ಓದಲು ಬರೆಯಲು ಅಗ್ರ ಸ್ಥಾನದಲ್ಲಿ ಬರುವರು ಎಂಬುದಕ್ಕೆ ಯಾವುದೇ ಸಂಶಯವಿಲ್ಲ.ಇನ್ನು ಉಳಿದ 4 ಮಕ್ಕಳಲ್ಲಿ ಒಬ್ಬ B ಗ್ರೇಡ್ ಮತ್ತು ಮೂವರು C ಗ್ರೇಡ್ ಪಡೆದರು.ಈ ಮಕ್ಕಳಲ್ಲೂ ಕೂಡ ಬದಲಾವಣೆಯನ್ನು ನಾವು ಗಮನಿಸಿದ್ದೇವೆ.ಅವರಿಗೆ ಇನ್ನು ಬೇಕಾದ ಎಲ್ಲಾ ಸಹಾಯವನ್ನು ಮಾಡಿ ಅವರನ್ನು ಕೂಡ A ಗ್ರೇಡ್ ಮಟ್ಟಕ್ಕೆ ತರಬೇಕು ಎಂಬುದೇ ನಮ್ಮ ಗುರಿ.ಈ ಗುರಿ ಸಾಧನೆಗೆ ನಾವೆಲ್ಲಾ ಒಟ್ಟಾಗಿ ಶ್ರಮಿಸುತ್ತೇವೆ.ನಿಮ್ಮೆಲ್ಲರ ಸಹಕಾರವು ನಮಗೆ ಬೇಕು.

Tuesday 26 August 2014

PTA meeting



ದಿನಾಂಕ 26-8-2014 ನೇ ಮಂಗಳವಾರ ನಮ್ಮ ಶಾಲೆಯಲ್ಲಿ  ಪಿ.ಟಿ.ಎ ಸಭೆ ನಡೆಯಿತು.ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ ಅವರು ಎಲ್ಲರಿಗೂ ಸ್ವಾಗತ ಕೋರಿದರು.ಸಭೆಯಲ್ಲಿ  5-9-2014 ಶುಕ್ರವಾರ ಓಣಂ ಹಬ್ಬದ ಆಚರಣೆಯನ್ನು ಎಲ್ಲರು ಸೇರಿ ಆಚರಿಸುವುದಾಗಿ ತೀರ್ಮಾನಿಸಲಾಯಿತು.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸವಿತಾ ಅವರು ನಮ್ಮ ಶಾಲಾ ಎರಡನೇ ಹಸ್ತ ಪತ್ರಿಕೆಯಾದ ಆರೋಗ್ಯವೇ ಭಾಗ್ಯವನ್ನು ಬಿಡುಗಡೆಗೊಳಿಸಿದರು.ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಅವರು ಶುಭ ಹಾರೈಸಿ, ಶ್ರೀ ಪುಷ್ಪರಾಜ್ ಅವರು ಧನ್ಯವಾದ ಹೇಳಿದರು

Sunday 24 August 2014

ಚಿಣ್ಣರ ಹಸ್ತದಿಂದ





   ಗಿಳಿ

ಗಿಳಿಯೇ ಗಿಳಿಯೇ ನೀ ಕೆಳಗಿಳಿಯೇ
ಮಾವಿನಮರದಿಂದ
                    ಇಳಿಯೆನು ಇಳಿಯೆನು ನಾ ಕೆಳಗಿಳಿಯೆನು
                   ಮಾವಿನಮರದಿಂದ
ತಿಂಡಿಯ ಕೊಡುವೆ ತಿನಸನು ಕೊಡುವೆ
ಬಾ ಗಿಳಿ ಹತ್ತಿರಕೆ
                     ಬಾರೆನು ನಾನು ಬಾರೆನು ನಾನು
                    ಬಂಧಿಸುವೆ ನೀ ನನಗೆ
ಬಂಧಿಸಲಾರೆ ಬಂಧಿಸಲಾರೆ
ಸ್ವತಂತ್ರವಾಗಿರು ನೀ ಗಿಣಿಯೇ
                      ಗಿಳಿಯೇ ಗಿಳಿಯೇ ನೀ ಕೆಳಗಿಳಿಯೇ
                      ಮಾವಿನಮರದಿಂದ 
                                                                                  ನವ್ಯ ಕೆ
                                                                                   IV ನೇ ತರಗತಿ


Sunday 17 August 2014

ಸಮವಸ್ತ್ರ ವಿತರಣೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸವಿತ ಅವರು ನೆರವೇರಿಸಿದರು



ಸ್ವಾತಂತ್ರ್ಯ ದಿನಾಚರಣೆ- ಸಭಾ ಕಾರ್ಯಕ್ರಮ (Independence day celebration)


ಸಭೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಬಿಂದು ಅವರು ಉದ್ಘಾಟಿಸಿ ಮಾತನಾಡಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸವಿತ ಅವರು ಅಧ್ಯಕ್ಷತೆಯನ್ನು ವಹಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ನಡೆಸಿದ ಸ್ಫರ್ಧೆಗಳ ಬಹುಮಾನವನ್ನು ಬಿಂದು ಅವರು

ವಿತರಿಸಿದರು
ನಮ್ಮ ಶಾಲಾ ಸ್ವಾತಂತ್ರ್ಯ ದಿನಾಚರಣೆ- ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸವಿತ ಅವರು ಧ್ವಜಾರೋಹಣಗೈದರು

Wednesday 6 August 2014

OUR SCHOOL MAGAZINE KALARAVA


ಸಾಕ್ಷರದ ಉದ್ಘಾಟನೆ ಮತ್ತು ಮಾಸಿಕ ಬಿಡುಗಡೆ

 ಇಂದು ನಮ್ಮ ಶಾಲೆಯಲ್ಲಿ ಶಾಲಾ ಮಟ್ಟದ ಸಾಕ್ಷರದ ಉದ್ಘಾಟನೆಯನ್ನು ಕಾರಡ್ಕ ಪಂಚಾಯತ್ ಸದಸ್ಯೆ ಶ್ರೀಮತಿ ಬಿಂದು ಅವರು ಔಪಚಾರಿಕವಾಗಿ ನೆರವೇರಿಸಿದರು.ಈ ಶುಭ ವೇಳೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸವಿತಾ ಅವರು ನಮ್ಮ ಶಾಲಾ ಮಾಸಿಕದ ಬಿಡುಗಡೆಯನ್ನು ಮಾಡಿದರು.


Saturday 2 August 2014

SCHOOL TRIP TO MANGLORE

 ನೆನಪಿನ ಆಳದಿಂದ ,,,,,,,ನಮ್ಮ ಶಾಲಾ ಪ್ರವಾಸ