Friday, 26 December 2014
Saturday, 1 November 2014
ಕುಂಬಳೆ ಸಬ್ ಜಿಲ್ಲೆಯಲ್ಲಿ ಉತ್ತಮ ಶಾಲಾ ಬ್ಲಾಗ್ ನ್ನು ಆಯ್ಕೆಮಾಡಲಾಯಿತು,ಇದರಲ್ಲಿ ನಮ್ಮ ಶಾಲಾ ಬ್ಲಾಗ್ 3 ನೇ ಸ್ಥಾನವನ್ನು ಪಡೆದಿರುವ ಹೆಮ್ಮೆಯ ವಿಚಾರವನ್ನು ನಿಮಗೆಲ್ಲರಿಗೂ ತಿಳಿಸುತ್ತಿದ್ದೇನೆ.ಈ ಬಹುಮಾನವು ಮುಂದೆ ಕೂಡ ಉತ್ತಮ ರೀತಿಯಲ್ಲಿ ಮುಂದುವರಿಸಲು ಒಂದು ಪ್ರೇರೇಪಣೆಯಾಗಿರುವುದು.ನಮ್ಮ ಬ್ಲಾಗ್ ಉತ್ತಮ ಮಟ್ಟಕ್ಕೆ ತಲುಪಬೇಕಾದರೆ ನಿಮ್ಮೆಲ್ಲರ ಸಹಕಾರ ನಮಗೆ ಬೇಕು.ಬ್ಲಾಗಿನ ಮೂಲಕ ನಮ್ಮೊಂದಿಗೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.ಜೊತೆಗೆ ಶಾಲೆಯ ಯಶಸ್ಸಿಗೆ ಕೈ ಜೋಡಿಸಿ....
ಧನ್ಯವಾದಗಳು
ಮುಖ್ಯೋಪಾಧ್ಯಾಯಿನಿ ಹಾಗೂಅಧ್ಯಾಪಕ ವೃಂದ
Saturday, 27 September 2014
Tuesday, 23 September 2014
ROLE PLAY 1 STANDARD
"ಚೀಯಾಂ ಚೀಯಾಂ ಚಿಕ್ಕ ಗುಬ್ಬಿ
ಚೀಯಾಂ ಚೀಯಾಂಗೋ......"
ಈ ಗೀತೆಯ ದೃಶ್ಯಾವಿಷ್ಕಾರವನ್ನು ಒಂದನೇ ತರಗತಿಯ ಮಕ್ಕಳು ಬಹಳ ಆಕರ್ಷಕವಾದ ರೀತಿಯಲ್ಲಿ ಹಾಡಿ ಅಭಿನಯಿಸಿದರು.ಗುಬ್ಬಿಯ ಕಥೆಯನ್ನು ಹಾಡಿ ಅಭಿನಯಿಸುವಾಗ ಅವರೆಲ್ಲರೂ ನಿಜಕ್ಕೂ ಅದೇ ಕಥಾಪಾತ್ರವಾಗಿ ಬದಲಾಗಿದ್ದರು.ಸಿರಿಯು ಗುಬ್ಬಿಯ ಮುಖವಾಡ ಧರಿಸಿ ತನ್ನ ಮುಗ್ಧ ಮಾತಿನ ಮೂಲಕ ನಾಟಕದ ನೈಜ ರೂಪವನ್ನುಇನ್ನೂ ಉತ್ತಮಪಡಿಸಿದಳು.ಉಳಿದವರೂ ಕೂಡ ತಮ್ಮತಮ್ಮ ಅಭಿನಯವನ್ನುಬಹಳ ಉತ್ತಮ ರೀತಿಯಲ್ಲಿ ಮಾಡಿದರು.ಇದಕ್ಕೆಲ್ಲದಕ್ಕೂ ಬೆನ್ನೆಲುಬಿನಂತೆ ಅವರ ನೆಚ್ಚಿನ ಅಧ್ಯಾಪಿಕೆ ಉಷಾ ಅವರು ಮಕ್ಕಳ ಜೊತೆಗಿದ್ದರು.ಈ ತರಗತಿಯು ಮಕ್ಕಳಿಗೂ ಟೀಚರಿಗೂ ಮರೆಯಲಾಗದ ಸವಿ ನೆನಪುಗಳಲ್ಲಿ ಒಂದಾಗುವುದು..
Subscribe to:
Posts (Atom)

